ಜಲಕೃಷಿ ವಿಭಾಗ
ಜಲಕೃಷಿ ವಿಭಾಗವು ಸಿಹಿನೀರಿನ ಮೀನುಗಾರಿಕೆ, ಮೀನು ಪೋಷಣೆ ಮತ್ತು ಆಹಾರ ತಂತ್ರಜ್ಞಾನ, ಮೀನು ಆಹಾರ ಜೀವಿಗಳು, ಅಲಂಕಾರಿಕ ಮೀನುಗಳು, ಚೌಳುಪ್ಪು ನೀರು ಕೃಷಿ ಮತ್ತು ಸಮುದ್ರದಲ್ಲಿ ಮೀನು ಕೃಷಿ, ಜಲಾಶಯದಲ್ಲಿ ಜಲಕೃಷಿ, ಮೀನು ತಳಿಶಾಸ್ತ್ರ ಮತ್ತು ಸಂತಾನೋತ್ಪತ್ತಿ, ಮೀನುಗಾರಿಕಾ ರಸಾಯನಶಾಸ್ತ್ರ, ಮೀನು ಜೈವಿಕ ತಂತ್ರಜ್ಞಾನ ಮತ್ತು ಮಾಹಿತಿ, ಮೀನು ಮತ್ತು ಚಿಪ್ಪು ಮೀನು ಉತ್ಪಾದನಾ ನಿರ್ವಹಣೆ ಮುಂತಾದ ವಿಷಯಗಳಲ್ಲಿ ಕೋರ್ಸುಗಳನ್ನು ನೀಡುತ್ತದೆ.
ಸಂಶೋಧನೆ
• ಮೀನಿನ ಅನುವಂಶೀಯತೆ ಮತ್ತು ಮೀನು ಸಂತಾನೋತ್ಪತ್ತಿ
• ಮೀನು ಪೋಷಣೆ ಮತ್ತು ಆಹಾರ ತಂತ್ರಜ್ಞಾನ
• ಅಲಂಕಾರಿಕ ಮೀನಿನ ಉತ್ಪಾದನೆ
• ಮೀನಿನ ಜೈವಿಕ ತಂತ್ರಜ್ಞಾನ ಮತ್ತು ಮೀನಿನ ಆರೋಗ್ಯ
• ಮೀನಿನ ಕೃಷಿ ವ್ಯವಸ್ಥೆಗಳು
ಸೌಲಭ್ಯಗಳು
• ಸಂಶೋಧನೆ ಮತ್ತು ವಿವಿಧ ಮೀನು ಸಾಕಣೆ ಪದ್ದತಿಗಳು
• ಮಣ್ಣಿನ ಕೊಳಗಳು ಮತ್ತು ಸಿಮೆಂಟ್ ತೊಟ್ಟಿಗಳು
• ಪೌಷ್ಟಿಕಾಂಶ ಸಂಶೋಧನೆಗಾಗಿ ಆರ್ ಎ ಎಸ್ ವ್ಯವಸ್ಥೆ
• ಮೀನು ಆಹಾರ ಉತ್ಪಾದನೆ ಮತ್ತು ಗುಣಮಟ್ಟ ನಿಯಂತ್ರಣ ಪ್ರಯೋಗಾಲಯ
• ಪೋರ್ಟಬಲ್ ಚೈನೀಸ್ ಮೀನುಮರಿ ಉತ್ಪಾದನಾ ಕೇಂದ್ರ, ಗ್ಲಾಸ್ ಜಾರ್ ಉತ್ಪಾದನೆ
• ಸಿಹಿನೀರಿನ ಸಿಗಡಿ ಮೊಟ್ಟೆ ಕೇಂದ್ರ
• ಮೀನಿನ ಹಿಸ್ಟೋಲಾಜಿಕಲ್ ಅಧ್ಯಯನಕ್ಕೆ ಸೌಲಭ್ಯ
• ಮೀನು ಜೈವಿಕ ತಂತ್ರಜ್ಞಾನ ಮತ್ತು ಕೋಶ ಕೃಷಿ ಘಟಕ
• ಅಕ್ವೇರಿಯಂ ತಯಾರಿಕಾ ಘಟಕ
ಸೇವೆಗಳು
• ಮೀನುಮರಿ ಉತ್ಪಾದನೆ ಮತ್ತು ವಿತರಣೆ
• ಮೀನುಸಾಕಣೆ ಮತ್ತು ಅಲಂಕಾರಿಕ ಮೀನುಸಾಕಣೆ ಮತ್ತು ಅದರ ನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮ
• ಕೃಷಿ ಸಲಹಾ ಮತ್ತು ವಿಸ್ತರಣಾ ಸೇವೆಗಳು
• ಮೀನುಗಾರಿಕೆ ಪ್ರದರ್ಶನ ಮತ್ತು ಜಾಗೃತಿ ಕಾರ್ಯಕ್ರಮ